ಕೋಳ ಸರೀ ಕೆಳಗಿನ ಕೋಣೆಯಲ್ಲಿ
ಈಗ ಯಾರೆಂದರೆ ಯಾರೂ ಇಲ್ಲ
ಕವನವೊಂದರ ಹಳೇ ಪ್ರತಿಯ ಹೊರತಾಗಿ
ಕೋಳುಕಂಬದ ತುದಿಯಿಂದ ಕತ್ತಲ ತೂರಿ
ಕೋಣೆ ಕಾಣಿಸುವ ಬೆಳಕಿನ ಕೊಳವೆ
ಅದರೊಳಗೆ ಸೇರಿ ಹಾರುವ ಕಣ ಧೂಳು
ಎಲ್ಲ ಅವಶೇಷಗಳ ನಡುವೆ ಹೂತುಹೋಗಿರಬಹುದು
ಬೆಂಡಾಗಿ ಬಿದ್ದ ಬಾಸಿಂಗದ ಕಡೇ ಚೂರು
ಆ ದಪ್ಪ ಮಣ್ಣಿನ ಗೋಡೆಗಳ ಕೆಳಗೆ
ಕೆಂಪು ಮಣ್ಣಿನ ವರೆದ ನೆಲದೊಳಗೆ
ಅಡ್ಡಡ್ಡ ಮಲಗಿರುವ ಬಾಗಿಲಿಗೂ ಮರೆತಂತಿದೆ
ತನ್ನ ಒಳಮೈಯ ಚಿಲಕದ ಜೊತೆಗೆ
ಅವಿತಿರುವ ಕಳ್ಳ ಮೀಡದ ಸುಪ್ತ ಇರುವು
ಆ ಕೋಣೆಗೆ ಹೋಗಲು ಸಮಾನಾಂತರ ಜೋಡಿಸಿಟ್ಟ
ಮರದ ಏಣಿಯ ಹತ್ತೊಂಬತ್ತು ಮೆಟ್ಟಿಲುಗಳು
ಅವಿತಿರುವ ಕಳ್ಳ ಮೀಡವನ್ನೇ ನೋಡುತ್ತಿರಬಹುದು
ಗೋಡೆಯೊಳಗೆ ತುಂಡಾದ ಜೋಡಿ ವೈರು
ಮುರಿದ ಹಲ್ಲಿನ ಕಡುಗಪ್ಪು ಸ್ವಿಚ್ ಬೋರ್ಡು
ಸುಟ್ಟ ಫಿಲಮೆಂಟಿನ ನಲವತ್ತು ವೋಲ್ಟಿನ ಬಲ್ಬು
ರಜತ ಮಹೋತ್ಸವದ ತಯಾರಿ ನಡೆಸುತ್ತಿರಬಹುದು
ಅಲ್ಲೊಂದು ತುಕ್ಕು ಹಿಡಿದ ಟ್ರಂಕೊಳಗೆ
ಜಮಾಯಿಸಿದೆ ಆಟಿಕೆಗಳ ಸಮಸ್ತ ಕುಲ
ಯಾರೂ ಬರದ ಕೋಣೆಯೊಳಗೆ
ಪಕತ್ತು ನಾಟಕದ ತಾಲೀಮು ನಡೆಸುತ್ತಿವೆ.
ಕಿಟಕಿಯ ಸಂದಿಯಿಂದ ಇಣುಕುತ್ತಿದೆ
ಒಂದು ಹಸಿ ಮೆಣಸಿಗೆ ಖಾಯಂ ಬರುತ್ತಿದ್ದ ಗಿಳಿ
ಮೈತುಂಬಿಕೊಂಡು ಬರುತ್ತಿದೆ ಒಳಗೆ
ಪುಟವಿಟ್ಟ ಸಂಜೆಗೆಂಪಿನ ಸಾಲು ಸೊಗಸು
ದೂರ ಸಂಜೆಗೆದುರಾಗಿ ಗರಿಬಿಚ್ಚಿ ಕುಣಿದ
ನವಿಲಿನ ಮೈತುಂಬ ನಕ್ಷತ್ರಗಳ ಹೊಳಪು
ಅದೆಷ್ಟು ಪರದೆ ಸರಿದಿರಬಹುದು ಅಲ್ಲಿ
ಸೂತ್ರಧಾರ ಅಜ್ಜಿಯ ಎಷ್ಟು ವರ್ಷ ಸವೆದಿರಬಹುದು
ನೆನಪುಗಳ ಹೊತ್ತಿಗೆಯಿಂದ ಆಕೆ ಹೊರತೆಗೆವ
ಪುಟ್ಟ ಪಟ್ಟಿಯ ನೀಲಿ ನರಗಳಲ್ಲಿ
ಮೊಮ್ಮಕ್ಕಳು-ಮರಿಮಕ್ಕಳೂ ಕವನವಾಗಿ ಹರಿದಿರಬಹುದು
ದೂರ ತೀರದಲ್ಲಿದ್ದ (ನೆನಪಿಗೂ ಬಾರದ) ಮನೆಮಂದಿಯೊಬ್ಬ
ಮದುವೆಯಾದದ್ದೇ ಕೊನೆ.
ಅವನ ತಲೆಯ ಬಾಸಿಂಗ ತೆಗೆದು ಸಾವಧಾನ
ಅಖಂಡ ಮನೆಯ ಒಂದೊಂದೇ ಕೋಣೆಗಳ ಬಳಸಿ
ಕೋಳುಗಂಬದ ತಲೆಗೇರಿಸಿ ಕುಳಿತರೆ ರಾಜಭಂಗಿ
ಸರೀ ಕೆಳಗಿನ ಕೋಣೆ-ತುಂಬಾ ಗಲಗಲ ಸದ್ದು
ಒಬ್ಬೊಬ್ಬರಾಗಿ ಇಳಿದುಹೋದರು ನಿಧಾನ
ಆ ಮೆಟ್ಟಿಲುಗಳೀಗ ಅಲ್ಲಿಗೆ ತಲುಪಲಾರವು.
ಕೋಣೆಯೊಳಗೊಂದು ಸಂಪೂರ್ಣ ಭಿನ್ನ ಲೋಕ -
ಟ್ರಂಕೊಳಗಿನ ನಾಟಕದ ತಾಲೀಮು ನೋಡುತ್ತ
ಚಂಗ ಹಾರಿದೆ ಒಳಗೆ
ಸೊಂಡಿಲು ಕಳಚಿದ ಗಣಪನ ಖಾಸಾ ಇಲಿ
ಮಾಯವಾಗಿವೆ ಎಂಬತ್ತೇಳರ ಕ್ಯಾಲೆಂಡರಿನ ಅಂಕಿಗಳು
ದಿನ-ವಾರ-ತಿಂಗಳು-ವರ್ಷದ ಹಂಗು ತೊರೆದು
ಪಟದ ಲಕ್ಷ್ಮಿ ಕರಗಿ ಬಿಟ್ಟಿದ್ದಾಳೆ ಖಾಲಿ ಹಾಳೆ
ಇಂದು-ನಾಳೆಯ ಲೆಕ್ಕದ ಕೆಳಮನೆಯಿಂದ
ಕಣ್ಣು ಕಟ್ಟುತ್ತಿದೆ ಕೊಲವೆರಿ ಸಾಲುಗಳು ಪಕ್ತ.
ತನ್ನೊಳಗಿನ ಕವನಗಳ ತಾಕತ್ತು ನೆನೆದು
ಅಳಿದುಳಿದ ಸಂಕಲನದ ಸಾಲೊಂದು ರೂಪಾಂತರವಾಗಿ
ಗೋಡೆಗಳ ತುಂಬ ಅಕ್ಷರಶ: ತೆವಳಲಾರಂಭಿಸಿವೆ
ತಡೆದು ಹಿಡಿದಿದ್ದ ನಡು ಮುರಿದಂತಾಗಿ
ಬಾಸಿಂಗ ಹೊತ್ತ ಕೋಳ ನೆತ್ತಿ ಬವಳಲಾರರಂಭಿಸಿವೆ.
ಜನವರಿಯಲ್ಲೇ ಬಂದು ಮನೆ ಅಳೆದುಹೋದವರು
ಅದೇ ಕೋಳ ಕೆಳಗಿದ್ದ ಮಂದಿಯೇ ತಿಳಿಯದಾಗಿದೆ
ಈಗ ಯಾರೆಂದರೆ ಯಾರೂ ಇಲ್ಲ
ಕವನವೊಂದರ ಹಳೇ ಪ್ರತಿಯ ಹೊರತಾಗಿ
ಕೋಳುಕಂಬದ ತುದಿಯಿಂದ ಕತ್ತಲ ತೂರಿ
ಕೋಣೆ ಕಾಣಿಸುವ ಬೆಳಕಿನ ಕೊಳವೆ
ಅದರೊಳಗೆ ಸೇರಿ ಹಾರುವ ಕಣ ಧೂಳು
ಎಲ್ಲ ಅವಶೇಷಗಳ ನಡುವೆ ಹೂತುಹೋಗಿರಬಹುದು
ಬೆಂಡಾಗಿ ಬಿದ್ದ ಬಾಸಿಂಗದ ಕಡೇ ಚೂರು
ಆ ದಪ್ಪ ಮಣ್ಣಿನ ಗೋಡೆಗಳ ಕೆಳಗೆ
ಕೆಂಪು ಮಣ್ಣಿನ ವರೆದ ನೆಲದೊಳಗೆ
ಅಡ್ಡಡ್ಡ ಮಲಗಿರುವ ಬಾಗಿಲಿಗೂ ಮರೆತಂತಿದೆ
ತನ್ನ ಒಳಮೈಯ ಚಿಲಕದ ಜೊತೆಗೆ
ಅವಿತಿರುವ ಕಳ್ಳ ಮೀಡದ ಸುಪ್ತ ಇರುವು
ಆ ಕೋಣೆಗೆ ಹೋಗಲು ಸಮಾನಾಂತರ ಜೋಡಿಸಿಟ್ಟ
ಮರದ ಏಣಿಯ ಹತ್ತೊಂಬತ್ತು ಮೆಟ್ಟಿಲುಗಳು
ಅವಿತಿರುವ ಕಳ್ಳ ಮೀಡವನ್ನೇ ನೋಡುತ್ತಿರಬಹುದು
ಗೋಡೆಯೊಳಗೆ ತುಂಡಾದ ಜೋಡಿ ವೈರು
ಮುರಿದ ಹಲ್ಲಿನ ಕಡುಗಪ್ಪು ಸ್ವಿಚ್ ಬೋರ್ಡು
ಸುಟ್ಟ ಫಿಲಮೆಂಟಿನ ನಲವತ್ತು ವೋಲ್ಟಿನ ಬಲ್ಬು
ರಜತ ಮಹೋತ್ಸವದ ತಯಾರಿ ನಡೆಸುತ್ತಿರಬಹುದು
ಅಲ್ಲೊಂದು ತುಕ್ಕು ಹಿಡಿದ ಟ್ರಂಕೊಳಗೆ
ಜಮಾಯಿಸಿದೆ ಆಟಿಕೆಗಳ ಸಮಸ್ತ ಕುಲ
ಯಾರೂ ಬರದ ಕೋಣೆಯೊಳಗೆ
ಪಕತ್ತು ನಾಟಕದ ತಾಲೀಮು ನಡೆಸುತ್ತಿವೆ.
ಕಿಟಕಿಯ ಸಂದಿಯಿಂದ ಇಣುಕುತ್ತಿದೆ
ಒಂದು ಹಸಿ ಮೆಣಸಿಗೆ ಖಾಯಂ ಬರುತ್ತಿದ್ದ ಗಿಳಿ
ಮೈತುಂಬಿಕೊಂಡು ಬರುತ್ತಿದೆ ಒಳಗೆ
ಪುಟವಿಟ್ಟ ಸಂಜೆಗೆಂಪಿನ ಸಾಲು ಸೊಗಸು
ದೂರ ಸಂಜೆಗೆದುರಾಗಿ ಗರಿಬಿಚ್ಚಿ ಕುಣಿದ
ನವಿಲಿನ ಮೈತುಂಬ ನಕ್ಷತ್ರಗಳ ಹೊಳಪು
ಅದೆಷ್ಟು ಪರದೆ ಸರಿದಿರಬಹುದು ಅಲ್ಲಿ
ಸೂತ್ರಧಾರ ಅಜ್ಜಿಯ ಎಷ್ಟು ವರ್ಷ ಸವೆದಿರಬಹುದು
ನೆನಪುಗಳ ಹೊತ್ತಿಗೆಯಿಂದ ಆಕೆ ಹೊರತೆಗೆವ
ಪುಟ್ಟ ಪಟ್ಟಿಯ ನೀಲಿ ನರಗಳಲ್ಲಿ
ಮೊಮ್ಮಕ್ಕಳು-ಮರಿಮಕ್ಕಳೂ ಕವನವಾಗಿ ಹರಿದಿರಬಹುದು
ದೂರ ತೀರದಲ್ಲಿದ್ದ (ನೆನಪಿಗೂ ಬಾರದ) ಮನೆಮಂದಿಯೊಬ್ಬ
ಮದುವೆಯಾದದ್ದೇ ಕೊನೆ.
ಅವನ ತಲೆಯ ಬಾಸಿಂಗ ತೆಗೆದು ಸಾವಧಾನ
ಅಖಂಡ ಮನೆಯ ಒಂದೊಂದೇ ಕೋಣೆಗಳ ಬಳಸಿ
ಕೋಳುಗಂಬದ ತಲೆಗೇರಿಸಿ ಕುಳಿತರೆ ರಾಜಭಂಗಿ
ಸರೀ ಕೆಳಗಿನ ಕೋಣೆ-ತುಂಬಾ ಗಲಗಲ ಸದ್ದು
ಒಬ್ಬೊಬ್ಬರಾಗಿ ಇಳಿದುಹೋದರು ನಿಧಾನ
ಆ ಮೆಟ್ಟಿಲುಗಳೀಗ ಅಲ್ಲಿಗೆ ತಲುಪಲಾರವು.
ಕೋಣೆಯೊಳಗೊಂದು ಸಂಪೂರ್ಣ ಭಿನ್ನ ಲೋಕ -
ಟ್ರಂಕೊಳಗಿನ ನಾಟಕದ ತಾಲೀಮು ನೋಡುತ್ತ
ಚಂಗ ಹಾರಿದೆ ಒಳಗೆ
ಸೊಂಡಿಲು ಕಳಚಿದ ಗಣಪನ ಖಾಸಾ ಇಲಿ
ಮಾಯವಾಗಿವೆ ಎಂಬತ್ತೇಳರ ಕ್ಯಾಲೆಂಡರಿನ ಅಂಕಿಗಳು
ದಿನ-ವಾರ-ತಿಂಗಳು-ವರ್ಷದ ಹಂಗು ತೊರೆದು
ಪಟದ ಲಕ್ಷ್ಮಿ ಕರಗಿ ಬಿಟ್ಟಿದ್ದಾಳೆ ಖಾಲಿ ಹಾಳೆ
ಇಂದು-ನಾಳೆಯ ಲೆಕ್ಕದ ಕೆಳಮನೆಯಿಂದ
ಕಣ್ಣು ಕಟ್ಟುತ್ತಿದೆ ಕೊಲವೆರಿ ಸಾಲುಗಳು ಪಕ್ತ.
ತನ್ನೊಳಗಿನ ಕವನಗಳ ತಾಕತ್ತು ನೆನೆದು
ಅಳಿದುಳಿದ ಸಂಕಲನದ ಸಾಲೊಂದು ರೂಪಾಂತರವಾಗಿ
ಗೋಡೆಗಳ ತುಂಬ ಅಕ್ಷರಶ: ತೆವಳಲಾರಂಭಿಸಿವೆ
ತಡೆದು ಹಿಡಿದಿದ್ದ ನಡು ಮುರಿದಂತಾಗಿ
ಬಾಸಿಂಗ ಹೊತ್ತ ಕೋಳ ನೆತ್ತಿ ಬವಳಲಾರರಂಭಿಸಿವೆ.
ಜನವರಿಯಲ್ಲೇ ಬಂದು ಮನೆ ಅಳೆದುಹೋದವರು
ಅದೇ ಕೋಳ ಕೆಳಗಿದ್ದ ಮಂದಿಯೇ ತಿಳಿಯದಾಗಿದೆ
No comments:
Post a Comment