ಒಂಟಿ ಮನೆಯ ಬಾಗಿಲಲ್ಲಿ ಚೆಂದ ನಗೆಯ ನೀರೆ
ಮುರುಕು ಹಿತ್ತಲ ಸಂದಿಯಲ್ಲಿ ಹಚ್ಚ ಹಸಿರು ಸೀರೆ
ಗಿರಗಿರ ತಿರುಗುವ ಗಾಳಿಯಲ್ಲಿ ನೋಡು ನಿನ್ನ ಅಂದ
ತೇವಗೊಂಡ ಮನಸಿನಲ್ಲಿ ತೂರಿಕೊಂಡ ಗಂಧ
ದಾರಿಗುಂಟ ಹಬ್ಬಿನಿಂತ ಬಣ್ಣದ ಹೂ ಬಾಲೆ
ದೊಡ್ಡ ಮರದ ನೆತ್ತಿಗೇರಿ ಪರಿಮಳದ ಮಾಲೆ
ಒತ್ತಗಟ್ಟಿ ನಿಂತರಲ್ಲಿ ಕಾಣಿಸದು ದಾರಿ
ತುರ್ತಿನಲ್ಲಿ ಹಚ್ಚಿ ನೋಡು ಒಂದು ಕಡ್ಡಿ ಗೀರಿ
ದಾರಿಯುದ್ದ ಬೀರಿಬಿದ್ದ ಬಿಟ್ಟ ಕಣ್ಣ ರಾಶಿ
ಹೆಕ್ಕುತ್ತ ಬಂದರೆ ಹಿತ್ತಲಲ್ಲೇ ಕಾಶಿ
ಕಾದಿದೆ ನೋಡು ನಿನಗೆ ಆ ಹಳೆಯ ಓಣಿ
ಎಳೆ ಎಳೆ ನೆನಪಿನಲ್ಲಿ ಮಾಡಿಬಿಡು ದೋಣಿ
ಮಣ್ಣಿನಲ್ಲಿ ಬಿದ್ದ ಹನಿಗೆ ಜಗದ ತುಂಬ ತಂಪು
ಹೊಳೆವ ರಾತ್ರಿ ತುಂಬಿ ಹರಿವ ನೀರು ಕಂಪು ಕಂಪು..
ಮುರುಕು ಹಿತ್ತಲ ಸಂದಿಯಲ್ಲಿ ಹಚ್ಚ ಹಸಿರು ಸೀರೆ
ಗಿರಗಿರ ತಿರುಗುವ ಗಾಳಿಯಲ್ಲಿ ನೋಡು ನಿನ್ನ ಅಂದ
ತೇವಗೊಂಡ ಮನಸಿನಲ್ಲಿ ತೂರಿಕೊಂಡ ಗಂಧ
ದಾರಿಗುಂಟ ಹಬ್ಬಿನಿಂತ ಬಣ್ಣದ ಹೂ ಬಾಲೆ
ದೊಡ್ಡ ಮರದ ನೆತ್ತಿಗೇರಿ ಪರಿಮಳದ ಮಾಲೆ
ಒತ್ತಗಟ್ಟಿ ನಿಂತರಲ್ಲಿ ಕಾಣಿಸದು ದಾರಿ
ತುರ್ತಿನಲ್ಲಿ ಹಚ್ಚಿ ನೋಡು ಒಂದು ಕಡ್ಡಿ ಗೀರಿ
ದಾರಿಯುದ್ದ ಬೀರಿಬಿದ್ದ ಬಿಟ್ಟ ಕಣ್ಣ ರಾಶಿ
ಹೆಕ್ಕುತ್ತ ಬಂದರೆ ಹಿತ್ತಲಲ್ಲೇ ಕಾಶಿ
ಕಾದಿದೆ ನೋಡು ನಿನಗೆ ಆ ಹಳೆಯ ಓಣಿ
ಎಳೆ ಎಳೆ ನೆನಪಿನಲ್ಲಿ ಮಾಡಿಬಿಡು ದೋಣಿ
ಮಣ್ಣಿನಲ್ಲಿ ಬಿದ್ದ ಹನಿಗೆ ಜಗದ ತುಂಬ ತಂಪು
ಹೊಳೆವ ರಾತ್ರಿ ತುಂಬಿ ಹರಿವ ನೀರು ಕಂಪು ಕಂಪು..
No comments:
Post a Comment